ರಾಜ್ಯದ ಎಲ್ಲಾ ಶಿಕ್ಷಕ ವೃತ್ತಿ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, 13,352 ಶಿಕ್ಷಕರ ನೇಮಕಾತಿಗೆ ಅಸ್ತು.!
2022ನೇ ನಲ್ಲಿ ಅಧಿಸೂಚಿಸಲಾಗಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (GPSTR) ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು (High Court) ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ವಿವಾದವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಈ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆಯ್ಕೆ ಪಟ್ಟಿಯನ್ನು ಮರು ರೂಪಿಸುವಂತೆ ಸೂಚನೆ ನೀಡಿತ್ತು. ಆದರೀಗ ಮರು ವಿಚಾರಣೆಯಲ್ಲಿ ವಿಭಾಗಿಯ ಪೀಠವು ಆ ಆದೇಶವನ್ನು ರದ್ದುಪಡಿಸಿ ಸಮಸ್ಯೆ ಬಗೆಹರಿಸಿ ನೇಮಕಾತಿಗೆ ಅಸ್ತು ಎಂದಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ…