Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ

Posted on September 26, 2023 By Admin No Comments on ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ

 

ರಾಜ್ಯದಲ್ಲಿ ಮುಂಗಾರಿನ ಕೊರತೆಯಿಂದಾಗಿ 195 ತಾಲೂಕುಗಳು ಬರ (drought thaluks) ಘೋಷಿತವಾಗಿವೆ. ಕಾವೇರಿ (Kaveri) ಕೊಳ್ಳದ ರೈತರ (Farmers) ಗೋಳು ತೀರದಂತಾಗಿದೆ, ಇದರ ನಡುವೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ (Drinking water) ಎದುರಾಗುವ ಸಾಧ್ಯತೆ ಇದೆ ಎಂದು ಕೂಡ ಊಹಿಸಲಾಗಿದೆ. ಆದರೂ ಇದೆಲ್ಲವನ್ನು ಮೀರಿ ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ವಿಫಲವಾಗಿವೆ ಎಂದು ಕನ್ನಡಪರ ಸಂಘಟನೆಗಳು, ರೈತ ಸಂಘಗಳು ಹಾಗೂ ವಿಪಕ್ಷಗಳು ಸರ್ಕಾರವನ್ನು ಖಂಡಿಸಿ ಹೋರಾಟ (Strike) ನಡೆಸುತ್ತಿವೆ.

ತಮಿಳುನಾಡಿಗೆ ಕಾವೇರಿ ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡುತ್ತಿವೆ ಈ ಹೋರಾಟಕ್ಕೆ ಚಿತ್ರನಟರು ಕೂಡ ಬಂದು ಸಹಕರಿಸಬೇಕು ಆ ಲಕ್ಷಣ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬೆನ್ನಲ್ಲೇ ಶಿವಣ್ಣ(shivaraj kumar) ಕೂಡ ಹೋರಾಟ ಸ್ಥಳಕ್ಕೆ ಹೋಗಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡು ಕಾವೇರಿ ಹೋರಾಟದಲ್ಲಿ ನಮ್ಮ ರೈತರ ಪರವಾಗಿ ಇರುತ್ತೇನೆ ಎಂದು ಹೇಳಿದ್ದರು.

ಆರೋಗ್ಯ ಲೆಕ್ಕಿಸದೆ ಈ ವಯಸ್ಸಿನಲ್ಲೂ ಕಾವೇರಿ ಹೋರಾಟ ಮಾಡಲು ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಕೂಡ ಮಂಡ್ಯದಲ್ಲಿ ಹೋರಾಟ ಸ್ಥಳಕ್ಕೆ ಭೇಟಿ ಕೊಟ್ಟು ನಾನು ಕೂಡ ರೈತ, ನನ್ನ ಜಮೀನಿಗೂ ಕಾವೇರಿ ನೀರಿನಿಂದಲೇ ಬೆಳೆ ಬರುತ್ತಿರುವುದು, ಕನ್ನಡ ನೆಲ ಜಲ ಭಾಷೆ ವಿಚಾರಕ್ಕೆ ಬಂದರೆ ನಾನೆಂದು ಕನ್ನಡಿಗರ ಪರ ಎಂದು ಹೇಳಿ ಭಾಗಿಯಾಗಿದ್ದರು. ಹೀಗೆ ಚಿತ್ರರಂಗದ ಅನೇಕರು ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದರೆ.

ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾವೇರಿ ನಮ್ಮದು ಎಂದು ಕೂಗಿ ಹೇಳುತ್ತಿದ್ದಾರೆ. ಈಗ ಕಿಚ್ಚ ಸುದೀಪ್ (Kicha Sudeep meets CM Siddaramaiah) ಅವರು ಕೂಡ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಪತ್ರ (request letter) ಸಲ್ಲಿಸಿ ಅದೇ ಬರಹವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಕೂಡ ಬರೆದುಕೊಂಡಿದ್ದಾರೆ.

ಒಂದೇ ಆವಾರ್ಡ್ ಫಂಕ್ಷನ್ ನಲ್ಲಿ ಬರೋಬ್ಬರಿ 10 SIIMA ಅವಾರ್ಡ್ ಪಡೆದುಕೊಂಡ ಕಾಂತರಾ ಸಿನಿಮಾ.!

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ವಿವರವಾದ ಪತ್ರ ಬರೆದು ತಮ್ಮ ಮನದಾಳದ ಭಾವನೆಯನ್ನು ವ್ಯಕ್ತಪಡಿಸಿ ರುವ ಸುದೀಪ್ ರವರು ಹೀಗೆಂದಿದ್ದಾರೆ. ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು, ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲಾ ಹೋರಾಟಗಳಲ್ಲೂ ನಾನು ಎಂದಿಗೂ ರಾಜ್ಯದ ಪರ.

ಮುಂಗಾರು ಮಳೆಯ ಅಭಾವದಿಂದ ರೈತರ ಕೃಷಿ ಕೆಲಸಕ್ಕೆ ಮಾತ್ರವಲ್ಲದೇ, ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವೆಲ್ಲರೂ ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ ಮತ್ತು ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ನ್ಯಾಯಾಧಿಕರಣ ಮತ್ತು ಕೇಂದ್ರ ಸರಕಾರಕ್ಕೆ ರಾಜ್ಯದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಕೊಡಬೇಕಿದೆ.

BJP ಮತ್ತು JDS ಮೈತ್ರಿ ಬೆನ್ನೆಲ್ಲೇ ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ.!

ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬರೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.

ಕೇಂದ್ರ ಸರಕಾರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಸಿ, ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಿ ಈ ಕಾರ್ಯ ಮಾಡಿ ಎಂದು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೂ ನೀರು ಸಿಗಲಿ. ಆದರೆ ಮೊದಲು ನಮ್ಮ ಕುಡಿಯುವ ನೀರಿನ ಅಭಾವ ಬಗೆಹರಿಯಲಿ, ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ. ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣ ನದಿ, ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ನಿಮ್ಮ ಮನೆಯಲ್ಲೂ ಪ್ರತಿದಿನ ಪ್ಯಾಕೆಟ್ ಹಾಲು ತರುತ್ತಿದ್ದೀರಾ.? ಆಗಿದ್ರೆ ಈ ವಿಷಯ ತಿಳಿದುಕೊಂಡಿರಲೇಬೇಕು.!

Viral News

Post navigation

Previous Post: ಆರೋಗ್ಯ ಲೆಕ್ಕಿಸದೆ ಈ ವಯಸ್ಸಿನಲ್ಲೂ ಕಾವೇರಿ ಹೋರಾಟ ಮಾಡಲು ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ.!
Next Post: ಎಲ್ಲಾ ರೀತಿಯ ವಾಹನ ಸವಾರರಿಗೆ ಹೋಸ ರೂಲ್ಸ್ ಜಾರಿ.! 90 ದಿನದೊಳಗೆ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ರೆ ದಂಡ ಫಿಕ್ಸ್ ಹೈಕೋರ್ಟ್ ಆದೇಶ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme